ಹನುಮಂತುವಿನಲ್ಲಿ ಏನೂ ಕಾಣಲಿಲ್ಲ ಹನುಮಂತು ಏನೂ ಅಲ್ಲ. ಅವನಲ್ಲಿ ಏನೂ ಕಾಣಲೇ ಇಲ್ಲ. ಆತನಿಗೆ ಕೊಡದೇ ಬೇರೆ ಯಾರಿಗೂ ಕೊಟ್ಟಿದ್ದರು ಖುಷಿ ಆಗುತ್ತಿತ್ತು. ಹಾಗಂತ ನನ್ನ ಮಗನಿಗೆ ಬಿಗ್ ಬಾಸ್ ಟ್ರೋಫಿ ಕೊಡಬೇಕು ಅಂತ ಏನೂ ಅಲ್ಲ. ಆದರೆ, ಹನುಮಂತು ಏನೂ ಅಲ್ಲ. ಆತನಿಗೆ ಟ್ರೋಫಿ ಕೊಟ್ಟಿರೋದು ಸರಿ ಅಲ್ಲ. ಹಾಗಂತ ತ್ರಿವಿಕ್ರಮ್ ತಾಯಿ ನೇರವಾಗಿಯೇ ಹೇಳಿಕೊಂಡಿದ್ದಾರೆ. advertisement ಮಾಧ್ಯಮ ಒಂದಕ್ಕೆ ಪ್ರತಿಕ್ರಿಯ ಕೊಟ್ಟ ತ್ರಿವಿಕ್ರಮ್ ತಾಯಿ ತುಂಬಾನೆ ನೇರವಾಗಿಯೇ ಮಾತ್ ಆಡಿದ್ದಾರೆ. ಹಾಗಾಗಿಯೇ ಈ ಒಂದು ವಿಡಿಯೋ ಹೆಚ್ಚು ವೈರಲ್ ಆಗುತ್ತಿದೆ. ಎಲ್ಲರಿಗೂ ಕಂಡದ್ದು ಇವರಿಗೆ ಯಾಕೆ ಕಾಣಲಿಲ್ಲ ತ್ರಿವಿಕ್ರಮ್ ತಾಯಿ ನೇರವಾಗಿಯೇ ಮಾತ್ ಆಡ್ತಾರೆ. ಅದನ್ನ ದೊಡ್ಮನೆಗೆ ಬಂದಾಗಲೇ ಗೊತ್ತಾಗಿದೆ. ಭವ್ಯ ಗೌಡ ಮತ್ತು ತ್ರಿವಿಕ್ರಮ್ ಬಗೆಗಿನ ಸ್ನೇಹದ ವಿಚಾರದಲ್ಲೂ ತ್ರಿವಿಕ್ರಮ್ ತಾಯಿ ನೇರವಾಗಿಯೇ ಮಾತ್ ಆಡಿದ್ದರು. ನನ್ನ ಮಗನನ್ನ ತುಂಬಾನೆ ಚೆನ್ನಾಗಿಯೇ ನೋಡಿಕೊಂಡಿದ್ದೀಯಾ, ತುಂಬಾನೆ ಖುಷಿ ಆಯಿತು. ರಾಧಾ ಮತ್ತು ಕೃಷ್ಣನನ್ನ ನೋಡಿದ ಹಾಗೆ ಆಯಿತು ಅಂತಲೇ ಹೇಳಿದ್ದರು. advertisement ಇದನ್ನೂ ಓದಿ: Malavika Avinash Birthday: ಮಾಳವಿಕಾ ಅವಿನಾಶ್ಗೆ ಮೊದ ಮೊದಲು ಸಿನಿಮಾ ಅವಕಾಶ ಸಿಕ್ಕಿದ್ದು ಹೇಗೆ? ಈ ಬಗ್ಗೆ ತಿಳಿದುಕೊಂಡ ತ್ರಿವಿಕ್ರಮ್ ತಮ್ಮ ಅಮ್ಮನ ಬಗ್ಗೆ ಹೇಳಿದ್ದರು. ನಮ್ಮ ಅಮ್ಮ ತುಂಬಾನೆ ನೇರವಾಗಿಯೇ ಇದ್ದಾರೆ. ಅವರು ನೇರವಾಗಿಯೇ ಎಲ್ಲವನ್ನೂ ಹೇಳಿಕೊಳ್ಳುತ್ತಾರೆ ಅಂತಲೇ ಹೇಳಿದ್ದರು. ಅದೇ ರೀತಿ ಇದೀಗ ನೇರವಾಗಿಯೇ ಮಾತನಾಡಿದ್ದಾರೆ ಅನಿಸುತ್ತದೆ. ಆದರೂ ಒಂದು ಪ್ರಶ್ನೆ ಕಾಡುತ್ತಿದೆ. ಇಷ್ಟೆಲ್ಲ ಮಾಡಿರೋ ಹನುಮಂತನಲ್ಲಿ ಯಾಕೆ ಏನೂ ಕಾಣಿಸಲೇ ಇಲ್ಲ ಅನ್ನೋದೇ ಆ ಪ್ರಶ್ನೆ ಆಗಿದೆ. advertisement ಹನುಮಂತನ ಗೆಲುವಿಗೆ ಯಾರಿಗೂ ಖುಷಿ ಇಲ್ವೆ ಹಾಗೇನೂ ಇಲ್ಲ. ತ್ರಿವಿಕ್ರಮ್ ತಾಯಿ ಅವರಿಗೆ ಒಂದು ಬೇಸರ ಇದೆ. ಅದು ಹನುಮಂತ ಗೆಲ್ಬಾರ್ದಿತ್ತು ಅಂತಲೇ ಹೇಳಿಕೊಂಡಿದ್ದರು. ಆದರೆ, ಹನುಮಂತನ ಗೆಲುವಿನ ಮ್ಯಾಟರ್ ಅಲ್ಲಿ ಬಹುತೇಕರು ಖುಷಿ ಆಗಿದ್ದಾರೆ. ಸ್ವತಃ ತ್ರಿವಿಕ್ರಮ್ ಕೂಡ ನನಗೆ ಖುಷಿ ಆಗಿದೆ ಅಂತಲೇ ಹೇಳಿದ್ದರು. advertisement ಇದನ್ನೂ ಓದಿ: Niveditha Gowda: ಗುಲಾಬಿ ಹೂ ಹಿಡಿದು ಮತ್ತೆ ಹೊಸ ರೀಲ್ಸ್ ಶೇರ್ ಮಾಡಿದ ನಿವೇದಿತಾ ಗೌಡ! ಸೌಂದರ್ಯಕ್ಕೆ ನೆಟ್ಟಿಗರು ಸುಸ್ತೋ ಸುಸ್ತು ರಜತ್ ಕಿಶನ್ ಕೂಡ ಇದನ್ನೆ ಹೇಳಿದ್ದಾರೆ. ಹನುಮಂತ ನನ್ನ ತಮ್ಮನೇ ಆಗಿದ್ದಾನೆ. ಈತ ಗೆದ್ದಿದ್ದಾನೆ. ಇದು ಖುಷಿ ತಂದಿದೆ ಅಂತಲೇ ಹೇಳಿದ್ದಾರೆ. ಧನರಾಜ್ ಆಚಾರ್ ಕೂಡ ಇದನ್ನೆ ಹೇಳಿದ್ದಾರೆ. ಹನುಮಂತ ಗೆಲ್ತಾನೆ ಅಂತ ಗೊತ್ತಿತ್ತು. ಅದು ಆಗಿದೆ. ಖುಷಿನೂ ಇದೆ ಅಂತಲೇ ಧನರಾಜ್ ಹೇಳಿಕೊಂಡಿದ್ದಾರೆ. ಒಟ್ಟಾರೆ, ಬಿಗ್ ಬಾಸ್‌ನಿಂದ ಹೊರಬಂದ ಹನುಮಂತನ ಗೆಲುವು ಎಲ್ಲರಿಗೂ ಖುಷಿ ತಂದಿದೆ. ಇನ್ನು ಕೆಲವರಿಗೆ ಏನೂ ಅಲ್ಲ ಅಂತಲೂ ಫೀಲ್ ಆಗಿದೆ ಅಂತಲೂ ಹೇಳಬಹುದು. tags : Location : Bangalore [Bangalore],Bangalore,Karnataka First Published : January 28, 2025 11:42 AM IST ಕನ್ನಡ ಸುದ್ದಿ/ ನ್ಯೂಸ್/ಮನರಂಜನೆ/ Trivikram Mother: ಹನುಮಂತುನಲ್ಲಿ ಏನೂ ಕಾಣಲಿಲ್ಲ, ಬೇರೆ ಯಾರಿಗೆ ಕೊಟ್ಟಿದ್ರೂ ಖುಷಿ ಆಗ್ತಿತ್ತು ಎಂದ ತ್ರಿವಿಕ್ರಮ್ ತಾಯಿ (责任编辑:) |