Bigg Boss Kannada: ಅಮ್ಮನ ಹೇಳಿಕೆಗೆ ಸ್ಪಷ್ಟನೆ ಕೊಟ್ಟು ಹನುಮಂತುಗೆ ಟಾಂಗ್ ಕೊಟ್ರಾ ತ್ರಿವಿಕ್ರಮ್? ಇದು ಬೇಡ್ವಾಗಿತ್ತು ಎಂದ ನೆಟ್ಟಿಗರು Published by: Last Updated:January 30, 2025 9:59 AM IST Bigg Boss Kannada: ಹನುಮಂತನ ಬದಲು ಬೇರೆ ಯಾರಿಗಾದ್ರು ಟ್ರೋಫಿ ಕೊಟ್ಟಿದ್ದರೆ ಖುಷಿ ಆಗುತ್ತಿತ್ತು. ಹಾಗಂತ ನನ್ನ ಮಗನೆ ಗೆಲ್ಲಬೇಕು ಅಂತ ಏನೂ ಇಲ್ಲ. ಆದರೆ, ಹನುಮಂತ ಏನೂ ಅಲ್ಲ ಅನ್ನೋದನ್ನೆ ತ್ರಿವಿಕ್ರಮ್ ತಾಯಿ ಹೇಳಿದ್ದರು. ಈ ಮಾತು ಹೇಳಿರೋದೇ ತಡ, ವಿಡಿಯೋ ವೈರಲ್ ಆಗಿ ಹೋಯಿತು. ಅಷ್ಟೇ ಅಲ್ಲ ಟ್ರೋಲ್ ಕೂಡ ಮಾಡಲು ಆರಂಭಿಸಿದ್ದರು.Follow us on Google News Link copied! 1/8 ಈ ಬಾರಿಯ ಬಿಗ್ ಬಾಸ್ ಸೀಸನ್ 11 ತ್ರಿವಿಕ್ರಮ್ ಅವರು ರನ್ನರ್ ಅಪ್ ಆಗಿರೋದು ಗೊತ್ತೇ ಇದೆ. ಅದರಲ್ಲೂ ತ್ರಿವಿಕ್ರಮ್ ರನ್ನರ್ ಅಪ್ ಆದ ಬಳಿಕ ಸಖತ್ ಚರ್ಚೆಯಲ್ಲಿ ಇದ್ದಿದ್ದು ಅವರ ಅಮ್ಮನ ಹೇಳಿಕೆಗಳು. ಮಗ ಮನೆಗೆ ರನ್ನರಪ್ ಆಗಿಯೇ ಬಂದ್ರು. ಇದರಿಂದ ಎಲ್ಲ ಅಮ್ಮಂದಿರಿಗೆ ಇರೋ ಹಾಗೆ ಇವರಿಗೂ ಸಣ್ಣ ಬೇರ ಇತ್ತು. ಆದರೆ, ಮಾಧ್ಯಮಗಳ ಪ್ರಶ್ನೆಗೆ ನೇರವಾಗಿಯೇ ಉತ್ತರ ಕೊಟ್ಟಿರೋದು ಇದೆ. ಹಾಗೆ ಮಾಧ್ಯಮವೊಂದಕ್ಕೆ ಕೊಟ್ಟ ರಿಯಾಕ್ಷನ್ (Reaction) ಅಲ್ಲಿಯೇ ಒಂದು ಮಾತು ಹೇಳಿದ್ದರು. advertisement 2/8 ಹನುಮಂತನ ಬದಲು ಬೇರೆ ಯಾರಿಗಾದ್ರು ಟ್ರೋಫಿ ಕೊಟ್ಟಿದ್ದರೆ ಖುಷಿ ಆಗುತ್ತಿತ್ತು. ಹಾಗಂತ ನನ್ನ ಮಗನೆ ಗೆಲ್ಲಬೇಕು ಅಂತ ಏನೂ ಇಲ್ಲ. ಆದರೆ, ಹನುಮಂತ ಏನೂ ಅಲ್ಲ ಅನ್ನೋದನ್ನೆ ತ್ರಿವಿಕ್ರಮ್ ತಾಯಿ ಹೇಳಿದ್ದರು. ಈ ಮಾತು ಹೇಳಿರೋದೇ ತಡ, ವಿಡಿಯೋ ವೈರಲ್ ಆಗಿ ಹೋಯಿತು. ಅಷ್ಟೇ ಅಲ್ಲ ಟ್ರೋಲ್ ಕೂಡ ಮಾಡಲು ಆರಂಭಿಸಿದ್ದರು. advertisement 3/8 ಹನುಮಂತು ಏನೂ ಅಲ್ಲ. ಅವನಲ್ಲಿ ಏನೂ ಕಾಣಲೇ ಇಲ್ಲ. ಆತನಿಗೆ ಕೊಡದೇ ಬೇರೆ ಯಾರಿಗೂ ಕೊಟ್ಟಿದ್ದರು ಖುಷಿ ಆಗುತ್ತಿತ್ತು. ಹಾಗಂತ ನನ್ನ ಮಗನಿಗೆ ಬಿಗ್ ಬಾಸ್ ಟ್ರೋಫಿ ಕೊಡಬೇಕು ಅಂತ ಏನೂ ಅಲ್ಲ. ಆದರೆ, ಹನುಮಂತು ಏನೂ ಅಲ್ಲ. ಆತನಿಗೆ ಟ್ರೋಫಿ ಕೊಟ್ಟಿರೋದು ಸರಿ ಅಲ್ಲ. ಹಾಗಂತ ತ್ರಿವಿಕ್ರಮ್ ತಾಯಿ ನೇರವಾಗಿಯೇ ಹೇಳಿಕೊಂಡಿದ್ದರು. advertisement 4/8 ತ್ರಿವಿಕ್ರಮ್ ತಾಯಿ ನೇರವಾಗಿಯೇ ಮಾತ್ ಆಡ್ತಾರೆ. ಅದನ್ನ ದೊಡ್ಮನೆಗೆ ಬಂದಾಗಲೇ ಗೊತ್ತಾಗಿದೆ. ಭವ್ಯ ಗೌಡ ಮತ್ತು ತ್ರಿವಿಕ್ರಮ್ ಬಗೆಗಿನ ಸ್ನೇಹದ ವಿಚಾರದಲ್ಲೂ ತ್ರಿವಿಕ್ರಮ್ ತಾಯಿ ನೇರವಾಗಿಯೇ ಮಾತ್ ಆಡಿದ್ದರು. advertisement 5/8 ನನ್ನ ಮಗನನ್ನ ತುಂಬಾನೆ ಚೆನ್ನಾಗಿಯೇ ನೋಡಿಕೊಂಡಿದ್ದೀಯಾ, ತುಂಬಾನೆ ಖುಷಿ ಆಯಿತು. ರಾಧಾ ಮತ್ತು ಕೃಷ್ಣನನ್ನ ನೋಡಿದ ಹಾಗೆ ಆಯಿತು ಅಂತಲೇ ಹೇಳಿದ್ದರು. ಈ ಬಗ್ಗೆ ಖಾಸಗಿ ವಾಹಿನಿಗೆ ತ್ರಿವಿಕ್ರಮ್ ರಿಯಾಕ್ಷನ್ ಕೊಟ್ಟಿದ್ದಾರೆ. ಎಲ್ಲ ತಾಯಂದರಿಗೂ ತನ್ನ ಮಗ ಗೆಲ್ಲಬೇಕು ಎಂಬುದು ಇದ್ದೇ ಇರುತ್ತದೆ. ಹನುಮಂತು ಗೆಲ್ಲೇ ಬಾರದು ಅನ್ನೋ ರೀತಿ ಹೇಳಿಲ್ಲ. advertisement 6/8 ಇನ್ನು ನನ್ನ ಅಮ್ಮ ಮನೆಗೆ ಬಂದಾಗ ನನ್ನ ಮಾತನಾಡಿಸೋಕ್ಕಿಂತ ಹನುಮಂತನನ್ನು ಮಾತನಾಡಿಸಿದ್ದೇ ಜಾಸ್ತಿ. ಹನುಮಂತ ಯಾರು ಅಂತ ಗೊತ್ತಾಗಿದ್ದೇ ನನ್ನ ಅಮ್ಮನಿಗೆ ಬಿಗ್ ಬಾಸ್ ಬಂದ ಮೇಲೆ. ತಾಯಿ ಪ್ರೀತಿ ಅಷ್ಟೇ. ಇದನ್ನು ವಿವಾದ ಮಾಡುವ ವಿಚಾರ ಎನೂ ಇಲ್ಲ ಎಂದಿದ್ದಾರೆ. ಖಂಡಿತವಾಗಿಯೂ ಖುಷಿ ಇದೆ ಎಂಬುದು ತ್ರಿವಿಕ್ರಮ್ ಮಾತು advertisement 7/8 ಈ ಮುಂಚೆ ಕೂಡ ಅಮ್ಮನ ವಿಚಾರ ಬಿಟ್ರೆ, ನಾನೇ ಹೇಳಿದ್ದೇನೆ. ಹನುಮಂತ ಗೆದ್ದಿರೋದಕ್ಕೆ ಬೇಸರ ಇಲ್ಲ. ಹನುಮಂತ ಒಳ್ಳೆ ವ್ಯಕ್ತಿನೇ ಆಗಿದ್ದಾನೆ. ಹಾಡುಗಳನ್ನ ಅಷ್ಟೆ ಚೆನ್ನಾಗಿಯೇ ಹಾಡಿದ್ದಾನೆ. ಹಾಗಾಗಿಯೇ ಜನರ ಪ್ರೀತಿ ಗಳಿಸಿದ್ದಾನೆ ಅಂತಲೇ ತ್ರಿವಿಕ್ರಮ್ ಹೇಳಿದ್ದರು. advertisement 8/8 ರಜತ್ ಕಿಶನ್ ಕೂಡ ಇದನ್ನೆ ಹೇಳಿದ್ದಾರೆ. ಹನುಮಂತ ನನ್ನ ತಮ್ಮನೇ ಆಗಿದ್ದಾನೆ. ಈತ ಗೆದ್ದಿದ್ದಾನೆ. ಇದು ಖುಷಿ ತಂದಿದೆ ಅಂತಲೇ ಹೇಳಿದ್ದಾರೆ. ಧನರಾಜ್ ಆಚಾರ್ ಕೂಡ ಇದನ್ನೆ ಹೇಳಿದ್ದಾರೆ. ಹನುಮಂತ ಗೆಲ್ತಾನೆ ಅಂತ ಗೊತ್ತಿತ್ತು. ಅದು ಆಗಿದೆ. ಖುಷಿನೂ ಇದೆ ಅಂತಲೇ ಧನರಾಜ್ ಹೇಳಿಕೊಂಡಿದ್ದರು. advertisement 1971ರಲ್ಲಿ ಯುದ್ಧ ನೌಕೆ ಕಳಿಸಿದಾಗಲೇ ಭಾರತ ಹೆದರಿಲ್ಲ, ಈಗ ಟ್ರಂಪ್ ಸುಂಕಕ್ಕೆ ಹೆದರುತ್ತೀವಾ? ಸುಂಕ ಏರಿಕೆ ಬೆದರಿಕೆ ಹಾಕಿದ ಟ್ರಂಪ್ ಕಾಂಗ್ರೆಸ್ ನಾಯಕನಿಂದ ತಿರುಗೇಟು ಪ್ರಧಾನಿ ಬೆಂಬಲಕ್ಕೆ ನಿಂತ ತಿವಾರಿ View Allಫೋಟೋ Top Storiesಇನ್ನಷ್ಟು ಸುದ್ದಿ advertisement (责任编辑:) |